®
speaker
Virtual
Great • Alfred • Nobel • Gives • Aspiration!
Nobel & Laureates' Ideas & Thought Processes!
Know Thyself Video

Alfred Nobel Video

501(C)3
Nonprofit Organization

ಗ್ರಂಥಾಲಯದ ಹೆಸರು ಗಂಗಾ

ಗ್ರಂಥಾಲಯದ ಹೆಸರು ಗಂಗಾ

ಡಾ|| ಅರ್. ವಿ. ನಾಗವೇಣಿ, ಎಂ.ಡಿ., ಎಂ.ಎಸ್. ಸಂಸ್ಥಾಪಕರು, ಗಂಗಾ ಗ್ರಂಥಾಲಯ

ಗ್ರಂಥಾಲಯದ ಹೆಸರು ನಮ್ಮ ಅಜ್ಜಿ (ತಂದೆಯ ತಾಯಿ) ಗಂಗಮ್ಮನವರಿಂದ ಬಂದದ್ದು . ಅವರಿಗೆ ಅ ಹೆಸರನ್ನು ಜಲದೇವತೆ ಗಂಗಾ ಮಾತೆಯ ಗೌರವಾರ್ಥ ಇಡಲಾಗಿತ್ತು. ಅಜ್ಜಿ ಗಂಗಮ್ಮ ಬಹು ಬುದ್ಧಿವಂತರು , ಪ್ರೇಮಮಯಿ, ನಿಷ್ಪಕ್ಷಪಾತಿ ಹಾಗೂ ಉದಾರ ವ್ಯಕ್ತಿಯಾಗಿದ್ದರು

Grandmother

ಅಜ್ಜಿ ಗಂಗಮ್ಮನವರು, ೩೩೧, ೧೫ನೇ ಅಡ್ಡರಸ್ತೆ, ೨ನೇ ಬ್ಲಾಕ್ , ಜಯನಗರ, ಬೆಂಗಳೂರು ೫೬೦೦೧೧ರ ಮುಂದೆ, ಸಾವು ೧೦ ಏಪ್ರಿಲ್, ೧೯೭೬, ಫೋಟೋ ೧೯೬೮.

Grandmother

ಅಜ್ಜಿ ಗಂಗಮ್ಮ, ಉದಾರಿಗಳಾದ ನಮ್ಮ ತಂದೆ ಅರ್ ವಿ ರಾಮಯ್ಯನವರು ನನಗೆ ಕೊಡಿಸಿದ ಅಕಾರ್ಡಿಯನ್ ಮಾದರಿಯ ಕೊಡಾಕ್ ಕ್ಯಾಮೆರಾದಲ್ಲಿ ನಾನೇ ತೆಗೆದ ಚಿತ್ರ,

ಗಂಗಮ್ಮನವರ ತಂದೆ ವಕೀಲ ಕೃಷ್ಣಮೂರ್ತಿಗಳು ಕರ್ನಾಟಕದಲ್ಲಿರುವ ಕಡಬ ಹಳ್ಳಿಯಿಂದ ನಡೆದೇ ೨೨೨೨ ಮೈಲಿ ದೂರದಲ್ಲಿರುವ ಮತ್ತು ಮೂರು ನದಿಗಳು ಸೇರುವ, ಗಂಗಾ ನದಿಯ ತೀರದ ಕಾಶಿಗೆ ಯಾತ್ರೆ ಹೋಗಿಬಂದರು. ಅವರು ಹಿಂತಿರುಗಿದ ನಂತರ ಅವರ ಎರಡನೆಯ ಮಗು ಜನಿಸಿತು. ಅ ಮಗುವನ್ನು ಗಂಗಾ ಎಂದು ಕರೆಯಲಾಯಿತು.

ಇನ್ ಫ್ಲುಎನ್ಜಾ ಖಾಯಿಲೆ ಮಕ್ಕಳಿಗೆ ಮತ್ತು ವೃದ್ದರಿಗೆ ಕ್ರೂರವಾಗಿರುತ್ತದೆ. ೧೯೧೮ರಲ್ಲಿ ತಲೆದೋರಿದ ಇನ್ ಫ್ಲುಎನ್ಜಾದ ಪಿಡುಗು ಅರೋಗ್ಯರಾಗಿಯೇ ಇದ್ದ ತರುಣರ ಪ್ರಾಣವನ್ನು ಇಲ್ಲವಾಗಿಸಿತು. ಹೀಗಾಗಿ ಗಂಗಮ್ಮನವರ ಪತಿ, ನುರಿತ ಸಂಸ್ಕೃತ ವಿದ್ವಾಂಸ ವೆಂಕಣ್ಣಯ್ಯ ಮತ್ತು ದೊಡ್ಡ ಜಂಟಿ ಕುಟುಂಬವೊಂದರ ಮುಖ್ಯಸ್ಥ ಅವರ ಉದಾರಿ ಮಾವ ನಾರಾಯಣಪ್ಪ ಹದಿನೈದು ದಿನಗಳ ಅಂತರದಲ್ಲಿ ನಿಧನರಾದರು. ಅವರ ಅನ್ಯಾಯಿ ಮೈದುನಂದಿರು , ಅವರು ಮಹಿಳೆಯಾಗಿದ್ದ ಕಾರಣ ಅವರ ವಿರುದ್ಧ ಪಕ್ಷಪಾತ ಮಾಡಿ, ಆಸ್ತಿಯ ಅವರ ಪಾಲನ್ನೆಲ್ಲಾ ದುರಾಸೆಯಿಂದ ತಾವು ದೋಚಿಕೊಂಡು ಅವರಿಗೆ ಜೀವನೋಪಾಯವೇ ಇಲ್ಲದಂತೆ ಮಾಡಿದರು. ಅಕೆಗೆ ಇಬ್ಬರು ಮಕ್ಕಳು- ಮೂರು ವರ್ಷದ ನನ್ನ ತಂದೆ [ವೆಂಕಟ]ರಾಮಯ್ಯ ಮತ್ತು ಅವರ ತಂಗಿ. ಆವೇಳೆಗಾಗಲೇ ಗಂಗಮ್ಮನವರ ತಂದೆ , ದಯಾಳು ಕೃಷ್ಣಮೂರ್ತಿ ಸ್ವರ್ಗಸ್ಥರಾಗಿದ್ದರು. ಇದಾದ ಒಂದು ಶತಮಾನದ ನಂತರವೂ ಭಾರತೀಯ ಪುರುಷರಲ್ಲಿ ಬಹುಮಂದಿಗೆ ಮಹಿಳೆಯರ ಬಗ್ಗೆಯ ಧೋರಣೆಯಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ.

ಚಿತ್ರದಲ್ಲಿ ಕಾಣುವ ಗಂಗಮ್ಮ ತುಸು ಬಿಸಿಯಾದ ಚಳಿಗಾಲದ ಸೂರ್ಯನ ಬೆಳಕಿನಲ್ಲಿ ಕನ್ನಡದ ಚಂದಮಾಮ ಪತ್ರಿಕೆಯನ್ನು ಓದುತ್ತಿದ್ದಾರೆ. ಈ ಮನೆಯನ್ನು ಕಟ್ಟಿದವರು ನಮ್ಮ ತಂದೆ ಮೆಕ್ಯಾನಿಕಲ್ ಇಂಜಿನಿಯರ್ ಆರ್. ವಿ. ರಾಮಯ್ಯನವರು. ಉದಾರಿಗಳಾದ ಇವರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ರಾಗಿಮುದ್ದನಹಳ್ಳಿಯಲ್ಲಿ ಜನಿಸಿದರು. ಅವರು ಸಣ್ಣ ಕೈಗಾರಿಕಾ ಇಲಾಖೆಯ ಡೈರೆಕ್ಟರ್ ಆಗಿದ್ದಾಗ, ಭಾರತ ಸರ್ಕಾರ ಅವರನ್ನು ಬೆಂಗಳೂರಿನ ಸೆಂಟ್ರಲ್ ಮೆಷಿನ್ ಟೂಲ್ಸ್ ಸಂಸ್ಥೆಯನ್ನು ಪ್ರಾರಂಭಿಸಲು ಅದರ ಏಕೈಕ ಜಾಯಿಂಟ್ ಡೈರೆಕ್ಟರ್ ಆಗಿ ವರ್ಗಾ ಮಾಡಿತು. ತುಮಕೂರು ರಸ್ತೆಯಲ್ಲಿರುವ ಅದನ್ನು ಈಗ ಹೆಸರು ಸೆಂಟ್ರಲ್ ಮ್ಯಾನುಫ್ಯಾಕ್ಚರಿಂಗ್ ಇನ್ಸ್ಟಿಟ್ಯೂಟ್ ಎಂದು ಕರೆಯಲಾಗಿದೆ. ಅವರೇ ಸ್ಥಾಪಿಸಿದ ಸಂಸ್ಥೆಯಲ್ಲಿ ಅವರನ್ನು ಡೈರೆಕ್ಟರ್ ಆಗಿ ನೇಮಿಸಲು ಭಾರತ ಸರ್ಕಾರ ನಿರಾಕರಿಸಿತು. ಹೀಗಾಗಿ ಅವರು ತಮ್ಮ ಹಿಂದಿನ ಹುದ್ದೆಗೆ ಹಿಂದಿರುಗಿದರು. ಅವರನ್ನು ಬೆಂಗಳೂರಿನ ಕಚೀರಿಗೆ ನೇಮಿಸಲಾಯಿತು. ಅವರು ರಾಜಾಜಿನಗರದ ಸಣ್ಣ ಕೈಗಾರಿಕಾ ಸೇವಾ ಕೇಂದ್ರದ ಡೈರೆಕ್ಟರ್ ಆಗಿದ್ದಾಗ, ೫೪ ವರ್ಷದ ಚಿಕ್ಕ ವಯಸ್ಸಿನಲ್ಲಿಯೇ ಮೃತರಾದರು.

ಅಸಂಖ್ಯಾತ ಬಹುಮಾನಿತರಿಗೆ ಅನ್ವಯವಾಗುವ ಎದುರಿಸಬೇಕಾದ ಪ್ರತಿಕೂಲ ಪರಿಸ್ಥಿತಿಗಳು, ಮಾಡಬೇಕಾಗಿ ಬಂದ ತ್ಯಾಗ, ಕಷ್ಟದ ದುಡಿಮೆ, ಪ್ರೌಢ ವಿದ್ಯಾಭ್ಯಾಸದಲ್ಲಿ ಆಸಕ್ತಿ, ಮುಂದಿದ್ದ ಸವಾಲುಗಳು, ಮೆಟ್ಟಿ ನಿಲ್ಲಬೇಕಾದ ತೊಡಕುಗಳು, ಮತ್ತು ಭೀತಿಗೊಳಿಸುವ ಪಕ್ಷಪಾತ ಮೊದಲಾದುವುಗಳನ್ನು ಕುರಿತಒಳನೋಟವನ್ನು ಈ ಪುಟದಲ್ಲಿ (web page) ಕಾಣಬಹುದು. ಇದಲ್ಲದೇ ವಲಸೆ ಬಂದ ಬಹುಮಾನಿತರಿಗೆ ಸಂಬಂಧಪಟ್ಟ ಹಡಗಿನ ದಾಖಲೆಗಳ ಬೆಲೆಯನ್ನೂ ಇದು ಎತ್ತಿ ತೋರಿಸುತ್ತದೆ. ಇಂದು ವಿಜ್ಞಾನ ಮತ್ತು ತಂತ್ರ ಶಾಸ್ತ್ರಗಳು ಎಷ್ಟೇ ಮುಂದುವರೆದಿದ್ದರೂ ಜನ ಒಂದಲ್ಲ ಒಂದಕ್ಕಾಗಿ ದೇವರಲ್ಲಿ ಬೇಡುತ್ತಾರೆ.

Ramiah

ಮೆಕಾನಿಕಲ್ ಎಂಜಿನಿಯರ್ ಆರ್. ವಿ. ರಾಮಯ್ಯನವರು, ಅವರ ವಿನಂತಿಯಂತೆ ಅವರಿಗೆ ಚಿನ್ನದ ಪದಕದ ಬದಲು ನೀಡಲಾದ ೫೦ ರೂಪಾಯಿಗಳನ್ನುಳ್ಳ ಥೈಲಿ ಅವರ ಕೈಯ್ಯಲ್ಲಿದೆ. ಅವರ ಸಾವು ೧೩ ಫೆಬ್ರವರಿ ೧೯೬೯ರಲ್ಲಿ

ಅವರ ವಿದ್ಯಾಭ್ಯಾಸದ ಪ್ರತಿ ಹಂತದಲ್ಲಿಯೂ ರಾಮಯ್ಯನವರು ಮೊದಲ ಸ್ಥಾನ (rank) ಗಳಿಸಿದರು. ಅವರಿಗೆ ಭೌತಶಾಸ್ತ್ರದ ಕುಕ್ ಬಹುಮಾನವೂ ದೊರೆತಿತ್ತು. ಅವರು ಪರೀಕ್ಷೆಯ ಫಲಿತಾಂಶಗಳನ್ನು ನೋಡುತ್ತಿದ್ದದ್ದು, ಯಾರಿಗೂ ಅಕಸ್ಮಾತಾಗಿ ತಮಗಿಂತ ಹೆಚ್ಚಿನ ಅಂಕಗಳು ದೊರೆತಿಲ್ಲ, ತಮಗೇ ಮೊದಲ ಸ್ಥಾನ ಬಂದಿದೆ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಮಾತ್ರ. ಅವರಿಗೆ ಎಂಜಿನಿಯರಿಂಗ್ನಲ್ಲಿ ಮೊದಲ ಸ್ಥಾನ ಲಭಿಸಿದಾಗ ಅವರು ಬಹುಮಾನವಿತ್ತ ದೊರೆ ಕೃಷ್ಣರಾಜ ಒಡೆಯರ್ ಅವರನ್ನು ತಮಗೆ ಚಿನ್ನದ ಪದಕದ ಬದಲಿಗೆ ನಗದು ಹಣ ನೀಡಬೇಕೆಂದು ಮನವಿ ಮಾಡಿಕೊಂಡರು

Bahadur

ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಅವರ ಪತ್ನಿ ಕಾಥಿಯಾವಾಡದ ರಾಣಾ ಪ್ರತಾಪ್ ಕುಮಾರಿ, ೧೯೦೦, ಕಲಾವಿದ: ರಾಜಾ ರವಿವರ್ಮ, ಫೋಟೋ: ರೂಪಿಕಾ ಚಾವ್ಲಾ, ಮೂಲ: ವಿಕಿಪೀಡಿಯಾ.

ನಾನು ಅಮೆರಿಕಾಕ್ಕೆ ಬರುವ ಮುಂಚೆ ನನ್ನ ತಾಯಿಯ ತಾಯಿ ಸಣ್ಣಮ್ಮ ಒಂದು ಸಂಗತಿಯನ್ನು ನನಗೆ ತಿಳಿಸಿದರು. ರಾಮಯ್ಯನವರು ಬೆಂಗಳೂರಿನ ಶ್ರೀ ಜಯಚಾಮರಾಜೇಂದ್ರ ವೃತ್ತಿ ಸಂಸ್ಥೆ (ಈಗ ಪಾಲಿಟೆಕ್ನಿಕ್) ಯಲ್ಲಿ ಉಪಾಧ್ಯಾಯರಾಗಿದ್ದರು. ಆಗ ಭಾರತ ಸರ್ಕಾರ ಅಮೆರಿಕಾದಲ್ಲಿ ಉನ್ನತ ವ್ಯಾಸಂಗ ನಡೆಸಲು ವಿದ್ಯಾರ್ಥಿವೇತನವನ್ನು ನೀಡುತ್ತಿತ್ತು. ಅದಕ್ಕೆ ಬೇಕಿದ್ದ ಅರ್ಹತೆ ಎಂದರೆ ಒಂದು ಡಿಗ್ರಿ (ಪದವಿ). ಅದಕ್ಕಾಗಿ ಅರ್ಜಿ ಹಾಕಿದ ರಾಮಯ್ಯನವರು ತಮ್ಮ ಅರ್ಜಿಯನ್ನು “ಸೂಕ್ತ ಹಾದಿಯಲ್ಲಿ” (ಅಂದರೆ ತಮ್ಮ ಸಂಸ್ಥೆಯ ಮುಖ್ಯಾಧಿಕಾರಿಗಳ ಮೂಲಕ) ಕಳುಹಿಸಲೆಂದು ತಮ್ಮ ಮುಖ್ಯಾಧಿಕಾರಿಗಳಿಗೆ ಸಲ್ಲಿಸಿದರು. ಆದರೆ ಅವರು ಬ್ರಾಹ್ಮಣ*ರಾಗಿದ್ದ ಕಾರಣ ಅಧಿಕಾರಿಗಳು ಅರ್ಜಿಯನ್ನು ರವಾನಿಸಲಿಲ್ಲ. ಬದಲಾಗಿ “ಈ ಸಂಸ್ಥೆಯಲ್ಲಿ ಯಾರೂ ಪದವೀಧರರಿಲ್ಲ” ಎಂದು ಸುಳ್ಳು ಹೇಳಿದರು. ಅದಲ್ಲದೆ ಕೇವಲ ಡಿಪ್ಲೋಮೋ ಹೊಂದಿದ್ದ ನೌಕರರ ಅರ್ಜಿಯನ್ನು ದೆಹಲಿಗೆ ರವಾನಿಸಿದರು.

* ಸನಾತನ ಧರ್ಮದ (ಹಿಂದೂ) ನೊಬೆಲ್ ಬಹುಮಾನಿತರಲ್ಲಿ ಬಹುತೇಕ ಮಂದಿ ಬ್ರಾಹ್ಮಣರು. ಭಾರತಕ್ಕೆ ತದ್ವಿರುದ್ಧವಾಗಿ , ವೈಜ್ಞಾನಿಕವಾಗಿ ಮುಂದುವರೆದ ದೇಶಗಳು ಮತ್ತು ನೊಬೆಲ್ ಪ್ರತಿಷ್ಥಾನ ಬ್ರಾಹ್ಮಣರ ವಿರುದ್ಧ ಪಕ್ಷಪಾತ ಮಾಡುವುದಿಲ್ಲ. ಇದೇ ತರಹದ ಪಕ್ಷಪಾತ ಪ್ರಪಂಚಾದ್ಯಂತ ಹಲವಾರು ಕೋಮುಗಳಲ್ಲಿದೆ.

Wavell

ಭಾರತದ ವೈಸ್ರಾಯ್ ಫೀಲ್ಡ್ ಮಾರ್ಷಲ್ ಸರ್ ಆರ್ಚಬಾಲ್ಡ್ ಪೆರ್ಸಿವಲ್ ವೇವೆಲ್, ದೆಹಲಿಯಲ್ಲಿನ ತಮ್ಮ ಕಛೇರಿಯಲ್ಲಿ.

ಈ ಸುಳ್ಳು ಮತ್ತು ತಮ್ಮ ಮೇಲೆ ಅದ ಪಕ್ಷಪಾತವನ್ನು ಅರಿತ ರಾಮಯ್ಯನವರು ಭಾರತದಲ್ಲಿದ್ದ ಅತ್ಯುನ್ನತ ಬ್ರಿಟಿಷ್ ಅಧಿಕಾರಿ ಮತ್ತು ಈ ವಿದ್ಯಾರ್ಥಿವೇತನವನ್ನು ಮಂಜೂರು ಮಾಡುವ ವ್ಯಕ್ತಿ, ವೈಸ್ ರಾಯ್ ವೇವೆಲ್ ಅವರನ್ನು ಸಂಪರ್ಕಿಸಿ ತಮಗೆ ಡಿಗ್ರಿ ಇರುವ ಸುದ್ದಿಯನ್ನು ತಲಪಿಸಿದರು. ವೈಸ್ ರಾಯ್ ವೇವೆಲ್ ರಾಮಯ್ಯನವರನ್ನು ಸಂದರ್ಶನಕ್ಕಾಗಿ ದೆಹಲಿಗೆ ಆಹ್ವಾನಿಸಿದರು. ಸಂದರ್ಶನಕಾರರು ಅವರನ್ನು ರಸಾಯನ ಶಾಸ್ತ್ರದ ಪ್ರಶ್ನೆಗಳನ್ನು ಕೇಳಿದರು. ಆಗ ರಾಮಯ್ಯನವರು ಎಂಜಿನಿಯರ್ ಆಗ ಬಯಸುವವರಿಗೆ ರಸಾಯನ ಶಾಸ್ತ್ರ ಅಗತ್ಯವಾಗಿಲ್ಲ. ಆದರೆ ಒಂದು ದಿವಸದ ಸಮಯ ನೀಡಿದರೆ ಅವರ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಹೇಳಿದರು. ಮಾರನೆಯ ದಿನ ಮಧ್ಯಾಹ್ನ ೪ ಗಂಟೆಗೆ ಬರುವಂತೆ ಅವರಿಗೆ ಹೇಳಲಾಯಿತು. ಮಾರನೆಯ ದಿನ ರಾಮಯ್ಯ ಅವರು ಕೇಳಿದ ಎಲ್ಲಾ ರಸಾಯನ ಶಾಸ್ತ್ರದ ಪ್ರಶ್ನೆಗಳಿಗೂ ಉತ್ತರ ನೀಡಿದರು. ಅವರಿಗೆ ವಿದ್ಯಾರ್ಥಿವೇತನ ದೊರೆಯಿತು. ಮಹಿಳೆಯರು ಸೇರಿದಂತೆ ಸರ್ವರೂ ವಿದ್ಯಾವಂತರಾಗಬೇಕೆಂಬುದು ರಾಮಯ್ಯನವರ ಅಸೆ ಆಗಿತ್ತು.

Records

ಅಮೇರಿಕಾ ನೌಕೆ, ಹಡಗು ಆಗಮನದ ದಾಖಲೆ; ನ್ಯೂಯಾರ್ಕ್, ೨೮ ಡಿಸೆಂಬರ್ ೧೯೪೫, ಅಮೇರಿಕಾದ ಕಡತಗಳು, ವಾಷಿಂಗ್ಟನ್, ಡಿಸಿ

passenger list

ಅಮೇರಿಕಾ ನೌಕೆ, ಪ್ರಯಾಣಿಕರ ಪಟ್ಟಿ ; ನ್ಯೂಯಾರ್ಕ್, ೨೮ ಡಿಸೆಂಬರ್ ೧೯೪೫, ಅಮೇರಿಕಾದ ಕಡತಗಳು, ವಾಷಿಂಗ್ಟನ್, ಡಿಸಿ.

ಭಾರತೀಯ ಪ್ರಜೆ ರಾಮಯ್ಯನವರು, ಐಯೋವಾ ಸ್ಟೇಟ್ ಕಾಲೇಜಿನಲ್ಲಿ [ಈಗ ಐಯೋವಾ ಸ್ಟೇಟ್ ವಿಶ್ವವಿದ್ಯಾಲಯ] ಬೇಸಾಯ ಯಂತ್ರಗಳನ್ನು ಕುರಿತ ತಮ್ಮ ಎರಡು ವರ್ಷದ ಅಧ್ಯಯನಕ್ಕಾಗಿ, ಕಲ್ಕತ್ತಾದಿಂದ ೩೦ ನವೆಂಬರ್ ೧೯೪೫ರಂದು ಅಮೆರಿಕಾದ ನೌಕಾಬಲದ ಹಡಗಿನಲ್ಲಿ ಪ್ರಯಾಣಮಾಡಿದರು. ಅವರು ಒಂದೂವರೆ ವರ್ಷದಲ್ಲಿಯೇ ಅಧ್ಯಯನವನ್ನು ಮುಗಿಸಿದರು. ಅವರು ಹಿಂತಿರುಗಿದಾಗ ತಂದು ಕೊಟ್ಟ ಕೋಡಕ್ ಕ್ಯಾಮೆರಾದಲ್ಲಿಯೇ ನಾನು ಗಂಗಮ್ಮನವರ ಫೋಟೋ ತೆಗೆದಿದ್ದು.

ಚರಿತ್ರಕಾರ ಪಾಲ್ (ಅಮೆರಿಕಾದ ಕಡತಗಳು, ಪೆನ್ಸಿಲ್ವೇನಿಯಾ ಅವೆನ್ಯೂ, ವಾಷಿಂಗ್ಟನ್, ಡಿಸಿ) ಅವರು ನನಗೆ ಹೇಳಿದರು – ಭಾರತ ಎರಡನೆಯ ಮಹಾಯುದ್ಧದಲ್ಲಿ ಭಾಗಿಯಾಗಿರಲಿಲ್ಲ. ಆದರೆ ನೆರೆಯ ಬರ್ಮಾದಲ್ಲಿ (ಮೈಯನ್ಮಾರ್) ಅಮೆರಿಕಾದ ಪಡೆಗಳಿದ್ದವು. ಯುದ್ಧಾನಂತರ ಈ ಪಡೆಗಳು ಅವರಿಗೆ ಸಹಾಯ ನೀಡುವ ಕಾರಣದಿಂದ ಆಯಾ ದೇಶಗಳಲ್ಲಿಯೇ ಉಳಿದವು. ಅವರು ಅಮೆರಿಕಾಕ್ಕೆ ಹಿಂದಿರುಗಲು ಹಡಗೇರಲು ಬಂದರೊಂದು ಬೇಕಾಗಿತ್ತು. ಕಲ್ಕತ್ತಾ ಬರ್ಮಾದ ಗಡಿಯಲ್ಲಿಯೇ ಇದೆ. ಯುರೋಪಿನಿಂದ ಬಂದ ವಲಸೆಗಾರರನ್ನು ಮಾತ್ರ ಅಮೇರಿಕಾ ಒಳಬಿಡುತ್ತಿತ್ತು. ಇದೇನಾದರೂ ಇಂಗ್ಲೆಂಡಿನ ಲಿವರ್ಪೂಲ್ ಆಗಿದ್ದರೆ ಅಗ ಅಲ್ಲಿಂದ ಅಮೆರಿಕಾಕ್ಕೆ ಪ್ರಯಾಣಿಕ ಹಡಗುಗಳು ಚಲಿಸುತ್ತಿದ್ದವು. ಬಹಳ ವರ್ಷಗಳ ನಂತರ ಅಮೇರಿಕ ತನ್ನ ವಲಸೆ ಕಾಯಿದೆಯನ್ನು ಬದಲಾಯಿಸಿ ನೈಪುಣ್ಯಕ್ಕೆ ಅನುಗುಣವಾಗಿ ವಲಸೆಗಾರರನ್ನು ಬರ ಮಾಡಿಕೊಳ್ಳುವ ಸಂಪ್ರದಾಯವನ್ನು ಹಾಕಿಕೊಂಡಿತು. ಅ ಪಟ್ಟಿಯಲ್ಲಿ ಕಾಣುವ ಕೆಲವೇ ಭಾರತಿಯರೆಲ್ಲಾ ಯುವಕರು. ಪ್ರಾಯಶಃ ಅವರಲ್ಲಿ ಅನೇಕರು ಉನ್ನತ ಶಿಕ್ಷಣಕ್ಕೆ ಅಮೆರಿಕಾಕ್ಕೆ ಹೊರಟವರಿರಬೇಕು.

Grandparents

ನನ್ನ ತಾಯಿಯ ತಂದೆ ತಾಯಿಗಳು, ಟಿ. ರಾಮ ರಾವ್ ಮತ್ತು ಸಣ್ಣಮ್ಮ. ಅವರು ಆಗಾಗ್ಗೆ ಹೇಳುತ್ತಿದ್ದರು “ಸದಾ ದಾನ ಧರ್ಮ ಮಾಡುತ್ತಿರಬೇಕು."

ನನ್ನ ಅಜ್ಜನ ಅಜ್ಜ ಅಶ್ವತ್ತಯ್ಯ ಅವರ ಊರಾದ ಕರ್ನಾಟಕದ ತಿರುಮಕೂಡಲಿನಿಂದ ಕಾಶಿಯವರೆಗೆ ಎರಡು ಬಾರಿ ನಡೆದರು (ಒಟ್ಟು ದೂರ ೪೪೪೪ ಮೈಲಿ); ಕಾರಣ ಸಂತಾನಕ್ಕಾಗಿ. ಅವರ ಒಬ್ಬನೇ ಮಗ ತಹಶೀಲ್ದಾರ ನಂಜುಂಡಯ್ಯ ಜನಿಸಿದರು. ನಂಜುಂಡಯ್ಯನವರ ಮಗ ಮತ್ತು ಸೊಸೆ, ಟಿ. ರಾಮ ರಾವ್ ಮತ್ತು ಸಣ್ಣಮ್ಮ ನವರೇ ನನ್ನ ಅಜ್ಜ ಮತ್ತು ಅಜ್ಜಿ. ಟಿ ರಾಮ ರಾವ್ ಮೃದು ಸ್ವಭಾವದವರು ಮತ್ತು ಸಹನಶೀಲರು. ಸವಾಲು ಎನಿಸಿದ ಹುಲಿಕೆರೆ ಸುರಂಗವನ್ನು ನಿರ್ಮಿಸಿದ ಅವರನ್ನು ಟನಲ್ ರಾಮ ರಾವ್ ಎಂದೇ ಕರೆಯಲಾಗುತ್ತಿತ್ತು. ಸರ್ ಎಂ. ವಿಶ್ವೇಶ್ವರಯ್ಯ ನವರೊಡಗೂಡಿ ಅವರು ಕೃಷ್ಣರಾಜಸಾಗರ ಆಣೆಕಟ್ಟು ಮತ್ತು ಪಕ್ಕದ ಬೃಂದಾವನ ತೋಟವನ್ನು ಅವರು ನಿರ್ಮಿಸಿದರು. ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ ಅಫ್ ಎಂನಿಯರಿಂಗ್ ನ ಸಂಸ್ಥಾಪಕರು ಅವರೇ. ಸಣ್ಣಮ್ಮ ಗೃಹಿಣಿಯಾಗಿದ್ದು ದೊಡ್ಡ ಮನೆಯನ್ನು ನಿರ್ವಹಿಸಿದರು, ಅಸಂಖ್ಯಾತ ಬಂಧು ಬಳಗದವರಿಗೆ ನೆರವಾದರು. ಅಲ್ಲದೆ, ಮಹಾರಾಜ ಸಂಸ್ಕೃತ ಪಾಠಶಾಲೆಯ ವಿದ್ಯಾರ್ಥಿಗಳಿಗೆ ಮನೆಯಲ್ಲಿ ಉಚಿತವಾಗಿ ಊಟ ನೀಡುತ್ತಿದ್ದರು. ಅವರಿಗೆ ಮಿಕ್ಕವರ ಮನಸ್ಸಿನ ಅಂತರಾಳದಲ್ಲಿ ಏನಿದೆ ಎಂಬುದರ ಅರಿವು ಸಾಕಷ್ಟಿತ್ತು. ಅವರು ಹೇಳುತ್ತಿದ್ದರು – “ಸದಾ ದಾನ ಧರ್ಮ ಮಾಡುತ್ತಿರಬೇಕು.” ಇದನ್ನು ನಾನು ಆಗಾಗ್ಗೆ ಕೇಳಿಸಿಕೊಂಡಿದ್ದೇ ನಾನು ಗಂಗಾ ಗ್ರಂಥಾಲಯವನ್ನು ಪ್ರಾರಂಭಿಸುವುದಕ್ಕೆ ಮುಖ್ಯ ಪ್ರೇರಣೆಯಾಯಿತು.

India map

ಗಂಗಾ ನದಿ, ಫೋಟೋ: ವಿಕಿಪೀಡಿಯಾ

ಮಹಾ ನದಿ ಗಂಗಾ ಹನ್ನೊಂದು ಉಪನದಿಗಳನ್ನು ಸ್ವೀಕರಿಸುತ್ತದೆ. ಅಲ್ಲದೆ ಅವೇ ತಂತಮ್ಮ ಉಪನದಿಗಳನ್ನು ಒಳಗೊಂಡಿವೆ. ತಾನು ಹರಿಯುತ್ತಾ ಅನೇಕಾನೇಕ ಜನರಿಗೆ ಬೆಂಬಲ ನೀಡಿ ಸಾಗರವನ್ನು ಸೇರಿ ಇಡೀ ಜಗತ್ತಿಗೆ ಸಹಾಯಕಾರಿಯಾಗುತ್ತದೆ. ವೈಜ್ಞಾನಿಕ ಶೋಧನೆಗಳು, ಶಾಂತಿ ಹೋರಾಟಗಳು ಗಂಗಾ ನದಿಯಂತೆಯೇ ಚಿಕ್ಕದಾಗಿ ಆರಂಭವಾಗಿ ಇದೇ ಮಾದರಿಯ ಹಾದಿಯನ್ನು ಹಿಡಿಯುತ್ತವೆ.

Discover Your Abilities and Aspirations!

$10 $25 $50 $100 Other
Tax Exempt 501(c)3 Non-Profit Organization
Any Currency

“One comes to be of just such stuff as that on which the mind is set” - Maithri Upanishath, VI.34:3

“…the peace that is found in libraries and laboratories…” - Louis Pasteur
Contact Us E-Mail: info@GangaLib.org
Ganga library non-profit 501(c)(3) org. Contributions tax deductible. IRS Tax ID 46-2892728

Copyright © 2023 Ganga Library Inc.   All Rights reserved.;