ನಾನು ಅಲ್ಫ್ರೆಡ್ ನೊಬೆಲನಿಂದ ಕಲಿತ್ತಿದ್ದೇನು
ಅಲ್ಫ್ರೆಡ್ ನೊಬೆಲ್
ಎಮ್ಯಾನ್ಯುಎಲ್ ನೊಬೆಲ್, ಅಲ್ಫ್ರೆಡ್ ನೊಬೆಲ್ಲನ ನೆಚ್ಚಿನ ಅಣ್ಣನ ಮಗ.
ರಾಗ್ನಾರ್ ಸೋಲ್ಮನ್, ಅಲ್ಫ್ರೆಡ್ ನೊಬೆಲನ ೨೬ ವರ್ಷದ ಸಹಾಯಕ ಮತ್ತು ಅವನ ಉಯಿಲಿನ ಆಚರಣಾಧಿಕಾರಿ
ಅಲ್ಫ್ರೆಡ್ ನೊಬೆಲನ ಉಯಿಲಿನಲ್ಲಿ ನೊಬೆಲ್ ಬಹುಮಾನಕ್ಕೆ ಸಂಬಂಧಿಸಿದ ಭಾಗ ಕಾನೂನಿನ ಪ್ರಕಾರ ದೋಷ ಪೂರಿತವಾಗಿದ್ದು,ಅದನ್ನು ಅನುಸಂಧಾನಕ್ಕೆ ತರುವುದು ಅಸಾಧ್ಯ ಎನಿಸಿತ್ತು. ಆಗ ರಷ್ಯಾದಲ್ಲಿದ್ದ ಆಲ್ಫ್ರೆಡ್ ನೊಬೆಲನ ಅಣ್ಣನ ಮಗ ಎಮ್ಯಾನ್ಯುಎಲ್ಲನಿಗೆ ಆತನ ಕೊನೆಯಾಸೆಯನ್ನು ಗೌರವಿಸುವ ಹಂಬಲ. ಎಮ್ಯಾನ್ಯುಎಲ್ ರಾಗ್ನಾರ್ ಸೋಲ್ಮನ್ನನಿಗೆ ರಷ್ಯಾದ ಈ ನಂಬಿಕೆಯ ಬಗ್ಗೆ ಹೇಳಿದ “ಆಚರಣಾಧಿಕಾರಿ ಉಯಿಲುಗಾರನ ಆತ್ಮದ ಬಾಕ್ಮೀದಾರ.”
ವಾರೆನ್ ಬಫೆಟ್ ಮತ್ತು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಭಾರತಕ್ಕೆ ಬೇಟಿ ನೀಡಿ ದಾನಶೀಲರಾಗುವಂತೆ ಧನಿಕರಲ್ಲಿ ಮನವಿ ಮಾಡಿಕೊಳ್ಳುತ್ತಾರೆ
ವಾರೆನ್ ಬಫೆಟ್ . ಚಿತ್ರ: ಮಾರ್ಕ್ ಹಿರಿಶ್ಲೆ / ವಿಕಿ
ಬಿಲ್ ಗೇಟ್ಸ್. ಚಿತ್ರ: ರಸೆಲ್ ವಾಟ್ಕಿನ್ಸ್ /ದಿ ಎಫ್ ಐ ಡಿ/ವಿಕಿ
ಮೆಲಿಂಡಾ ಗೇಟ್ಸ್. ಚಿತ್ರ: ವರ್ಲ್ಡ್ ಎಕನಾಮಿಕ್ ಫೋರಂ/ವಿಕಿ.
ಭಾರತ ದಾನ ನೀಡುವವರ ಪಂಕ್ತಿಯಲ್ಲಿ ಕಡೆಯ ಸ್ಥಾನ ಗಳಿಸಿದ್ದು, ಲಂಚಕೋರತ್ವದಲ್ಲಿ ಪ್ರಥಮ ಸ್ಥಾನ ಪಡೆದಿದೆ. ಹೊರದೇಶಗಳ ದಾನಶೂರರು ಅಲ್ಲಿಗೆ ತೆರಳಿ ಅಲ್ಲಿನ ಸಿರಿವಂತರಿಗೆ ದಾನ ದತ್ತಿ ನೀಡಿಎಂದು ಹೇಳಬೇಕಾಗಿರುವುದು ಅಪಮಾನದ ವಿಷಯ. ಕೆಳಗೆ ನಮೂದಿಸಲಾಗಿರುವುದು ಒಂದು ಸತ್ಯ ಸಂಗತಿ. ದಾನನಿರತಳಾಗ ಬಯಸಿದ ಮಾರಿ ಎಂಬ ಓರ್ವಳೇ ಸಹೋದರಿಯನ್ನು ಆಸ್ತಿಗಾಗಿ ಕೊಲ್ಲಲೆತ್ನಿಸಿದ ಮೂರು ಸಿರಿವಂತ ಸಹೋದರರನ್ನು ಆಧರಿಸಿದ ಕತೆ ಇದು. ಸಹೋದರರು ಅವಳಿಗೆ ನ್ಯಾಯವಾಗಿ ಸೇರಬೇಕಾಗಿದ್ದ ತಂದೆ ತಾಯಿಯರ ಮತ್ತಿ ಅಜ್ಜಿ ತಾತಂದಿರ ಸ್ವತ್ತಿನ ಪಾಲನ್ನು ಕಬಳಿಸಲು ಯತ್ನಿಸಿದರು. ಹಗೆ ಮತ್ತು ಕ್ರೌರ್ಯಗಳನ್ನು ಎದುರಿಸಿದ ಓರ್ವ ಮಹಿಳೆಯ ಧೈರ್ಯ ಮತ್ತು ಹೋರಾಟದ ಕತೆ ಇದು. ಭಾರತ ಮತ್ತು ವಿಶ್ವದ ಮತ್ತಿತರ ಭಾಗಗಳಲ್ಲಿ ಅತ್ಯಂತ ಸಾಮಾನ್ಯ ಎಣಿಸಿದ ಪ್ರವೃತ್ತಿಯನ್ನು ಆಧರಿಸಿದ ಕತೆ ಇದು.
ಮಾರಿಯ ಅಜ್ಜಿ, ತಾತ ಮತ್ತು ತಂದೆ.
ದಾನಶೂರೆ ಅಜ್ಜಿ ದಿವಂಗತರು
ದಾನಶೂರ ತಂದೆ ದಿವಂಗತರು
ದಾನಶೂರ ತಾತ ದಿವಂಗತರು
ದಾನಶೂರೆ ಅಜ್ಜಿ ದಿವಂಗತರು
ಅಜ್ಜಿ ತಾತ ಮತ್ತು ತಂದೆ ಪ್ರಾಮಾಣಿಕವಾಗಿ ದುಡಿದು ಕೋಟ್ಯಾಂತರ ರೂಪಾಯಿಗಳ ಅಸ್ತಿಯನ್ನು ಮಾಡಿದರು. ಅವರಿಗೆ ನಗರದಲ್ಲಿ ದೊಡ್ಡ ಮತ್ತು ಸುಂದರವಾದ ಬಂಗಲೆ, ವ್ಯವಸಾಯಕ್ಕೆ ಜಮೀನು, ಭತ್ತದ ಗದ್ದೆ, ಹಳ್ಳಿಯಲ್ಲಿ ಒಂದು ಮನೆ, ಚಿನ್ನ, ಬೆಳ್ಳಿ, ಹಣ ಇವೆಲ್ಲಾ ಇದ್ದವು. ಅವರಿಗೆ ಸಮಾನತೆ, ದಾನಶೀಲತೆ, ಉದಾರತೆಗಳಲ್ಲಿ ನಂಬಿಕೆ. ನತದೃಷ್ಟ ಜನರೊಡನೆ ತಮ್ಮ ಅಸ್ತಿಯನ್ನು ಹಂಚಿಕೊಳ್ಳಬೇಕೆಂಬ ಹಂಬಲ ಅವರಿಗೆ.
ಮಾರಿಯ ತಾಯಿ
ಮಾರಿಯ ತಂದೆಯ ನಿಧನಾನಂತರ ಅವರ ಸ್ವತ್ತನ್ನೆಲ್ಲಾ ತಾಯಿಯ ಹೆಸರಿಗೆ ವರ್ಗಾಯಿಸಲಾಯಿತು. ತಾಯಿಗೆ ಗಂಡುಮಕ್ಕಳ ಬಗ್ಗೆ ತಾರತಮ್ಯ. ತನ್ನದೇ ಮಗಳು ಮಾರಿಗೆ ಅವಳಿಗೆ ಸಲ್ಲಬೇಕಾಗಿದ್ದ ಪಿತ್ರಾರ್ಜಿತ ಅಸ್ತಿಯನ್ನು ಕೊಡಲು ಒಪ್ಪಲಿಲ್ಲ ಅವಳು. ತಾಯಿಯ ನಂಬಿಕೆ ಏನೆಂದರೆ ಅಸ್ತಿಯನ್ನು ಗಂಡು ಮಕ್ಕಳು ಮತ್ತು ಅವರ ಕುಟುಂಬಗಳಿಗೆ ಮಾತ್ರ ಕೊಡಬೇಕು. ಅವಳಿಗೆ ಅವಳ ತಂದೆ ತಾಯಿಯರ, ಗಂಡನ ಅಥವಾ ಅತ್ತೆಯ ದೃಷ್ಟಿಕೋನ ಇರಲಿಲ್ಲ.
ಅವಳ ತಂದೆ ತಾಯಿಯರಿಗೆ ಪರಸ್ಪರ ಒಲವು ಮತ್ತು ಗೌರವಗಳಿದ್ದವು. ಅವರು ಗಂಡು ಮತ್ತು ಹೆಣ್ಣುಮಕ್ಕಳು ಎಲ್ಲರನ್ನು ಚೆನ್ನಾಗಿ ಪೋಷಿಸಿದರು. ಅವರ ಗಂಡುಮಕ್ಕಳಿಗೆ ಸಹೋದರಿಯರನ್ನು ಗೌರವಿಸುವಂತೆ ಬೋಧಿಸಿದರು.
ಅವಳ ಗಂಡನಿಗೆ ಮಹಿಳೆಯರಲ್ಲಿ ಸಮತೆ ಮತ್ತು ಸರ್ವರಿಗೂ ವಿದ್ಯಾಭ್ಯಾಸ ಇವುಗಳಲ್ಲಿ ನಂಬಿಕೆ. ಅವನ ಸಹೋದರಿ ಹೆರಿಗೆ ಸಮಯದಲ್ಲಿ ಸಾವನ್ನಪ್ಪಿದಾಗ ಅವಳ ಮೂರೂ ಚಿಕ್ಕ ಹೆಣ್ಣುಮಕ್ಕಳನ್ನು ತಾನು ಕರೆತಂದು ತನ್ನ ಮಕ್ಕಳ ಜೊತೆಗೇ ಬೆಳೆಸಿದ.
ಅವಳ ವಿತಮ್ತು ಅತ್ತೆ ಪ್ರತಿವರ್ಷವೂ ಬೆಳೆದ ಭತ್ತವನ್ನು ಮಾರಿ ಬಂದ ಹಣವನ್ನು ಕುಟುಂಬದ ಸದಸ್ಯರಲ್ಲಿ ಹಂಚುತ್ತಿದ್ದಳು. ಅತ್ತೆಗೆ ಮಹಿಳಾ ಸಮಾನತೆಯಲ್ಲಿ ನಂಬಿಕೆ ಇತ್ತು. ಅವಳು ತನ್ನ ಹಣವನ್ನು ಲಿಂಗ, ವಯಸ್ಸು ಮತ್ತು ಸಂಬಂಧಗಳನ್ನು ಎಣಿಸದೆ ತನ್ನ ಸೊಸೆ, ಮಗನ ಗಂಡು ಮತ್ತು ಹೆಣ್ಣು ಮಕ್ಕಳು, ನಿಧನಳಾಗಿದ್ದ ತನ್ನ ಮಗಳ ಹೆಣ್ಣುಮಕ್ಕಳು ಎಲ್ಲರಲ್ಲಿಯೂ ಸಮಾನವಾಗಿ ಹಂಚಿದಳು.
ತಾಯಿಗೆ ಮಹಿಳಾಸಮಾನತೆಯ ಬಗ್ಗೆ ಅರಿವಿದ್ದರೂ ಅವಳು ಸಧ್ಯದಲ್ಲಿ ಭಾರತದ ಸಮಾಜದಲ್ಲಿರುವ ಅಭ್ಯಾಸವನ್ನು ಹಿಡಿದಳು. ಈ ತಾರತಮ್ಯದಿಂದ ದೇಶಕ್ಕೆ ಮಾನವೀಯತೆಯ ನಷ್ಟವಾಗುವುದಲ್ಲದೆ ಭಾರತದ ಅರ್ಥಿಕ ಅಭಿವೃದ್ದಿ ೪% ಕಡಿಮೆಯಾಗುತ್ತದೆ.
ಮಾರಿಯ ಕ್ರೂರ ಸಹೋದರರು
?ಮೂರೂ ಸಹೋದರರು ತಾವು ಮಹಾಮಂದಿ ಎಂದುಕೊಂಡು ಮಾರಿಯ ಪಾಲು ತಮಗೇ ಬರಬೇಕೆಂದು ಭಾವಿಸಿದರು. ತಾಯಿ ಗಂಡು ಮಕ್ಕಳ ಕೈಯ್ಯಲ್ಲಿ ಬೊಂಬೆಯಾಗಿದ್ದಳು. ಅವರು ತೋರಿಸದ ಕಡೆ ಎಲ್ಲಾ ತಾನು
ಸಹಿ ಹಾಕುತ್ತಿದ್ದಳು
ಸಹೋದರರು ತಂದೆಯ ಸಾಗುವಳಿ ಭೂಮಿಯನ್ನು ಅನ್ಯಾಯವಾಗಿ ಮಾರಿದರು ಮತ್ತು ಮಾರಿಯ ಪಾಲನ್ನು ಕಬಳಿಸಿದರು.
ಮಾರಿ ಮತ್ತಾವುದೋ ನಗರದಲ್ಲಿ ಉನ್ನತ ಶಿಕ್ಷಣ ಪಡೆಯುತ್ತಿದ್ದಾಗ ಸಹೋದರರು ತಂದೆಯ ಸಾಗುವಳಿ ಭೂಮಿಯನ್ನು ಅನ್ಯಾಯವಾಗಿ ಮಾರಿದರು ಮತ್ತು ಮಾರಿಯ ಪಾಲನ್ನು ಕಬಳಿಸಿದರು. ಅಲ್ಲದೆ ಜಮೀನನ್ನು ಕತ್ತಡಗಳಿಗಾಗಿ ವಿಂಗಡಿಸಿ ಹೆಚ್ಚಿನ ಲಾಭಕ್ಕಾಗಿ ಮಾರಿದರು.
ಮಾರಿ
ತನ್ನ ವಿದ್ಯಾಭ್ಯಾಸವನ್ನು ಮುಗುಸಿದ ಮಾರಿ ತನ್ನ ತಂದೆಯ ಮನೆಗೆ ಹಿಂದಿರುಗಿ ಅರ್ಧ ಭಾಗಶಃ ಮಾತ್ರ ಕಟ್ಟಿದ ಮನೆಯ ಮೇಲ್ಭಾಗದಲ್ಲಿ ವಾಸಿಸಲಾರಂಭಿಸಿದಳು.
ಸಹೋದರರು ಮಾರಿಯನ್ನು ಸೀಮೆ ಎಣ್ಣೆಯಿಂದ ಸುಡಲೆತ್ನಿಸಿದರು.
ರಾತ್ರಿ ಬಹು ಹೊತಿನ ನಂತರ ಸಹೋದರರು ಮಾರಿಯನ್ನು ಸೀಮೆ ಎಣ್ಣೆಯಿಂದ ಸುಡಲೆತ್ನಿಸಿದರು. ಅವರು ಇದು ತಮ್ಮ ಜನ್ಮ ಸಿದ್ಧ ಹಕ್ಕು ಎಂದೇ ಭಾವಿಸಿದರು; ಕಾರಣ ತಾವು ಪುರುಶರಾದ್ದರಿಮ್ದ ಉನ್ನತ ಮಂದಿ. ತಾಯಿ ಈ ಭಯಾನಕ ದೃಶ್ಯವನ್ನು ವೀಕ್ಷಿ ಸಿದರೂ ಏನನ್ನೂ ಮಾಡಲಿಲ್ಲ.
ಆದರೆ ಮಾರಿ ತಪ್ಪಿಸಿಕೊಂಡಳು. ಮಧ್ಯರಾತ್ರಿಯಲ್ಲಿ ಅವಳು ಪೋಲಿಸ್ ಠಾಣೆಗೆ ಹೋಗಿ ಅಲ್ಲಿ ಪೊಲೀಸರಿಗೆ ತನ್ನ ಸಹೋದರರು ಮಾಡಿದ ಕೃತ್ಯವನ್ನು ವರದಿಮಾಡಿದಳು. ಪೊಲೀಸರು ಈ ಕೇಸನ್ನು ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ವರ್ಗಾಯಿಸಿದರು. ಮಾರನೆಯ ದಿನ ಮಾರಿಯ ತಾಯಿ ಅವಳು ಮನೆಯಲ್ಲಿ ಇಲ್ಲದಿರುವಾಗ ಪೊಲೀಸರು ಬಂದಿದ್ದರು ಎಂದು ಹೇಳಿದಳು. ಎದುರು ಮನೆ ಮಂದಿ ನಮ್ಮ ಮನೆಗೆ ಪೊಲೀಸರು ಏಕೆ ಬಂದಿದ್ದರು ಎಂದು ವಿಚಾರಿಸಿದರು ಎಂದು ತಾಯಿ ಕುಪಿತಳಾಗಿ ನುಡಿದಳು. “ಇದೇಯಾ ನೀನು ಮಾಡಿದ ಕೆಲಸ!” ಎಂದು ಆಕೆ ಮಾರಿಯನ್ನು ಧೂಷಿಸಿದಳು. ನ್ಯಾಯಾಲಯದ ಕೇಸನ್ನು ಹಿಂದಕ್ಕೆ ಪಡೆಯುವಂತೆ ಮಾರಿಯನ್ನು ಒತ್ತಾಯ ಪಡಿಸಿದಳು. ಮಾರಿ ಹಾಗೆ ಮಾಡಲಿಲ್ಲ. ನ್ಯಾಯಾಲಯ ಮಾರಿಯನ್ನು ಅವಳ ಕೇಸಿನ ಬಗ್ಗೆ ಅನೇಕ ವರ್ಷಗಳ ನಂತರ ಸಂಪರ್ಕಿಸಲೇ ಇಲ್ಲ. ಅವಳ ಸಹೋದರರನ್ನು ಶಿಕ್ಷಿಸಲಿಲ್ಲ. ಮಾರಿಗೆ ನ್ಯಾಯ ದೊರಕಲಿಲ್ಲ.
ಸಹೋದರರು ಮಾರಿಯ ಸಾವನ್ನು ಬಯಸಿದ್ದರು
ಸಹೋದರರು ಮಾರಿಯನ್ನು ಸತತವಾಗಿ ಪೀಡಿಸಿದರು.
ಸಹೋದರರು ಸತತವಾಗಿ ಮಾರಿಯನ್ನು ಅನೇಕ ರೀತಿಗಳಲ್ಲಿ ಪೀಡಿಸಿದರು- ಅವಳ ಮನೆಯ ಬಾಗಿಲ ಬಾಲಿ ಮೂತ್ರ ವಿಸರ್ಜನೆ ಮಾಡುವುದು, ಅವಳ ಮನೆ ನೀರನ್ನು ನಿಲ್ಲಿಸುವುದು, ಹೀಗೆ. ಮಧ್ಯರಾತ್ರಿಯಲ್ಲಿ ಮಾರಿ ಮನೆಯ ಹಿಂದಿನ ನಲ್ಲಿಯಲ್ಲಿ ನಿರು ಹಿಡಿದು ಮೆಟ್ಟಲುಗಳನ್ನು ಏರಿ ಮನೆಗೆ ಒಯ್ಯ ಬೇಕಾಯಿತು. ಸಹೋದರರು ಚಾಕುವುನಿಂದ ಅವಳನ್ನು ಇರಿಯಲು ಯತ್ನಿಸಿದರು, ಆದರೆ ಅವಳು ತಪ್ಪಿಸಿಕೊಂಡಳು. ಮಾರಿ ಪೋಲೀಸರಿಗೆ ದೂರು ನೀಡುತ್ತಲೇ ಇದ್ದಳು. ಅವರು ಏನನ್ನೂ ಮಾಡಲಿಲ್ಲ.
ಹೆಸರಾಂತ ದುಷ್ಕರ್ಮಿ ಮಾರಿಯನ್ನು ಆಕ್ರಮಿಸಿದಳು
ಬ್ಯಾಂಕ್ ಒಂದರಲ್ಲಿ ಹೇಯಕೃತ್ಯವನ್ನು ಎಸಗಿ ಅಲ್ಲಿಂದ ದೂಡಲ್ಪಟ್ಟ ಹೆಂಗಸೊಬ್ಬಳು ದುಷ್ಕರ್ಮಕ್ಕೆ ಹೆಸರಾದಳು. ಅನೇಕ ಜನರನ್ನ್ಯ್ ಅಕ್ರಮಿಸಿದ್ದ ಳು. ಅವಳು ದೂರದರ್ಷನದಲ್ಲಿ ನಟಿಸಿದಳು.
ಮಾರಿಯನ್ನು ಸೀಮೆಎಣ್ಣೆ ಸುರಿದು ಕೊಲ್ಲಲೆತ್ನಿಸಿದ ಒಂದು ವರ್ಷದ ನಂತರ ಈ ಹೆಂಗಸು ತನ್ನ ಮಗಳೊಡನೆ ಮಾರಿಯ ಮನೆಗೆ ನುಗ್ಗಿ ಅವಳನ್ನು ಉಳಿಯೋದರಲ್ಲಿ ಹೊಡೆದಳು. ಇದು ಪೂರ್ವ ನಿಯೋಜಿತ ಕ್ರತ್ಯ. ಸಹೋದರರ ಮನೆಯವರು ಕೆಳಗಿನ ಮನೆಯಲ್ಲಿ ವಾಸಿಸುತ್ತಿದ್ದರು. ಮಾರಿ ಹೋರಾಡಿ ಬಿಡಿಸಿಕೊಂಡಳು. ಮನೆಯ ಮುಂದಿದ್ದ ವಿದ್ಯಾ ಸಂಸ್ಥೆ ಒಂದರಿಂದ ವಿದ್ಯಾರ್ಥಿಗಳು ಮಧ್ಯಾಹ್ನದ ಊಟಕ್ಕೆಂದು ಹೊರಬರುತ್ತಿದ್ದರು. ಅವರು ದುಷ್ಕರ್ಮಿಯನ್ನು ಹಿಡಿದು ಪೊಲೀಸರು ಬರುವವರೆಗೂ ನಿಲ್ಲಿಸಿಕೊಂಡರು. ಪೊಲೀಸರು ಕೇಸನ್ನು ಸೆಷನ್ಸ್ ಕೋರ್ಟಿಗೆ ಕಳುಹಿಸಿದರು. ಸಹೋದರು ದುಷ್ಕರ್ಮಿ ಮತ್ತು ಅವಳ ಕುಟುಂಬದವರೊಡನೆ ಪಿತೂರಿ ನಡೆಸಿದ್ದು ಸ್ಪಷ್ಟ ವಾಯಿತು. ವರ್ಷಗಳಾದರೂ ಕೋರ್ಟಿನಲ್ಲಿ ಕೇಸು ಇತ್ಯರ್ಥವಾಗಲಿಲ್ಲ. ಮಾರಿಗೆ ಮತ್ತೆ ನ್ಯಾಯ ದೊರಕಲಿಲ್ಲ.
ಆತ್ಮರಕ್ಷಣೆಗೆ ಮಾರಿ ಸಮರೋಚಿತ ವಿದ್ಯೆ ಕಲಿಯ ಲಾರಂಭಿಸಿದಳು
ಆತ್ಮರಕ್ಷಣೆಗೆ ಮಾರಿ ಸಮರೋಚಿತ ವಿದ್ಯೆ ಕಲಿಯ ಲಾರಂಭಿಸಿದಳು .
ಸಹೋದರರು ಈ ವಿದ್ಯೆಯನ್ನು ಬೋಧಿಸುವ ಗುರುವಿನೊಡನೆಯೂ ಪಿತುಉರಿ ನಡೆಸಿ ಮಾರಿಯನ್ನು ಕೊಲ್ಲಿಸಲೆತ್ನಿಸಿದರು. ಮತ್ತೆ ಮಾರಿ ತಪ್ಪಿಸಿಕೊಂಡು ಈ ವಿದ್ಯೆಯನ್ನ್ಯ್ ಕಲಿಯುವದನ್ನೂ ಬಿಟ್ಟಳು.
ಸಹೋದರರು ಅಜ್ಜಿಯ ಬತ್ತದ ಗದ್ದೆ ಮತ್ತು ಮನೆಯನ್ನು ಅನ್ಯಾಯವಾಗಿ ಮಾರಿ ಮಾರಿಯ ಪಾಲನ್ನು ಕಬಳಿಸಿದರು.
ಸಹೋದರರು ಅಜ್ಜಿಯ ಬತ್ತದ ಗದ್ದೆ ಮತ್ತು ಮನೆಯನ್ನು ಅನ್ಯಾಯವಾಗಿ ಮಾರಿ ಮಾರಿಯ ಪಾಲನ್ನು ಕಬಳಿಸಿದರು. ಮತ್ತೆ ಮಾರಿಗೆ ತನ್ನ ಜನ್ಮ ಸಿದ್ಧ ಹಕ್ಕನ್ನು ವಂಚಿಸಲಾಯಿತು. ಮಾರಿ ಯಾವುದೇ ಶಾಲೆ ಇಲ್ಲದಿದ್ದ ಹಳ್ಳಿಯಲ್ಲಿ ಶಾಲೆ ತೆರೆಯ ಬಯಸಿದಳು.
ಸಹೋದರರು ಸತತವಾಗಿ ಮಾರಿಯನ್ನು ಪೀಡಿಸಿದರು.
ಸಹೋದರರು ಮಾರಿಯ ಜಾತಕವನ್ನು ಜೋಹಿಸರಿಗೆ ಕಳಿಸಿದರು.
ನವ ದೆಹಲಿಯಲ್ಲಿ ಪ್ರಸಿದ್ಧ ಜೋಹಿಸರೊಬ್ಬರು ಇದ್ದದ್ದು ಸಹೋದರರಿಗೆ ತಿಳಿದು ಬಂದಿತು. ಅವರಿಗೆ ಮಾರಿಯ ಜಾತಕವನ್ನು ಕಳಿಸಿದರು. .
ಪ್ರಸಿದ್ಧ ಜೋಹಿಸರು ಸಹೋದರರಿಗೆ ಮಾರಿಯ ಬಗ್ಗೆ ವರದಿಯೊಂದನ್ನು ಕಳಿಸಿದರು: “ಈ ಮಹಿಳೆ ಕಾರ್ಯತತ್ಪರೆ.. ಅವಳು ಯಾರಿಗೂ ಹೊರೆಯಲ್ಲ. ಅವಳ ಸುತ್ತಾ ಇರುವ ಮಂದಿ ಸರಿಹೊಂದುವುದು ಮುಖ್ಯ.”
ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗುವ ಹಂಬಲ ಮಾರಿಗೆ.
ವೈಜ್ಞಾನಿಕ ಸಂಶೋಧನೆಯಲ್ಲಿ ತೊಡಗುವ ಹಂಬಲವಿತ್ತು ಮಾರಿಗೆ. ವಿಜ್ಞಾನದಲ್ಲಿ ಮುಂದುವರೆದಿದ್ದ ದೇಶವೊಂದು ಅವಳ ಸಹಾಯವನ್ನು ಬಯಸಿತು. ಮಾರಿ ಅಲ್ಲಿಗೆ ಸಂಶೋಧನೆಯಲ್ಲಿ ತೊಡಗಲು ಹೋದಳು. ಜನರ ಕಲ್ಯಾಣಕ್ಕಾಗಿ ತನ್ನ ಜ್ಞಾನವನ್ನು ನೀಡಿ ತಾನೂ ಭಾಗಿಯಾಗ ಬಹುದು ಎನಿಸಿತು ಅವಳಿಗೆ. ಅವಳ ಜೀವನ ಭಾರತದ ಮಿಕ್ಕ ಮಹಿಳೆಯರು ತಮ್ಮ ಸಮಾನತೆಗಾಗಿ ಹೋರಾಡುವಂತೆ ಪ್ರಚೋದಿಸುತ್ತದೆ ಎಂದು ಅವಳು ನಂಬುತ್ತಾಳೆ.
ಮಾರಿಗೆ ತನ್ನ ತಂದೆ, ತಾತ ಮತ್ತು ಅಜ್ಜಿಯರಿಗೆ ಗೌರವ ನೀಡಿ ಅವರು ಬಯಸಿದಂತೆ ದಾನಶೀಲಳಾಗುವ ಹಂಬಲ.
ಮಾರಿ ತನ್ನ ಕುಟುಂಬ ಅಥವಾ ಅದರ ಸಂಸ್ಕೃತಿಗೆ ಶರಣಾಗ ಬಯಸಲಿಲ್ಲ. ದಾನಶೀಲರು ಮತ್ತು ಮಿಕ್ಕವರ ಹಿತ ಬಯಸುವವರ ಸಮಸ್ಯೆಗಳನ್ನು ಬಗೆಹರಿಸಲು ಅವಳು ಸಿದ್ಧಳಿದ್ದಳು. ವಾರೆನ್ ಬಫೆಟ್ ಮತ್ತು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಅವರುಗಳ ಮಾತನ್ನು ಅನುಷ್ಟಾನಕ್ಕೆ ತಂದಿದ್ದಳು ಅವಳು. ಅವಳು ಅಲ್ಫ್ರೆಡ್ ನೊಬೆಲನ ಜೀವನ ಚರಿತ್ರೆಯನ್ನು ಓದಿದಾಗ ದಾನಶೀಲತೆಯಬಗ್ಗೆ ಅವಳ ಆಲೋಚನೆಗಳನ್ನು ಸ್ಫೂರ್ತಿದಾಯಕವಾಗಿ ಹೇಳುವ ಮಾರ್ಗದ ಅರಿವಾಯಿತು. ಅವಳ ನಂಬಿಕೆ ಎಮ್ಯಾನ್ಯುಎಲ್ಲನ ಮಾತಿನಲ್ಲಿ ಎರಕವಾಗಿದೆ- “ಆಚರಣಾಧಿಕಾರಿ ಉಯಿಲುಗಾರನ ಆತ್ಮದ ಬಾಕ್ಮೀದಾರ” . ಈ ಸಮಸ್ಯೆಗಳನ್ನು ಬಗೆಹರಿಸುವಾಗ ಅವಳು ಮಹಿಳೆಯರು ಮಾತ್ರ ವಲ್ಲ, ೨೧ ನೆಯ ಶತಮಾನದಲ್ಲಿ ವಿಶ್ವಾದ್ಯಂತ ಎಲ್ಲ ಮಾನವರೂ ಎದುರಿಸುತ್ತಿರುವ ಅಪಾಯವನ್ನು ಎದುರಿಸುತ್ತಿದ್ದಳು.
-ಮುಗಿಯಿತು –
Discover Your Abilities and Aspirations!
$10 $25 $50 $100 Other
Tax Exempt 501(c)3 Non-Profit Organization
Any Currency